On Friday, South actress Namitha announced that she will be getting married to Veerandra Chowdhary on November 24.
'ಕ್ರೇಜಿಸ್ಟಾರ್' ನಾಯಕಿ ನಮಿತಾಗೆ ಮದುವೆ: ಭಾವಿ ಪತಿ ಇವರೇ ನೋಡಿ.! ಸಮಂತಾ, ಪ್ರಿಯಾಮಣಿ ನಂತರ ಈಗ ಮತ್ತೋರ್ವ ನಟಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ನಮಿತಾ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಇತ್ತೀಚೀನ ದಿನಗಳಲ್ಲಿ ನಮಿತಾ ಅವರ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿತ್ತು. ನಮಿತಾ ಅವರ ಜೊತೆ ಮದುವೆ ಆಗ್ತಿದ್ದಾರೆ, ಇವರ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದ್ದವು. ಆದ್ರೆ, ಇದಕ್ಕೆಲ್ಲಾ ತೆರೆ ಎಳೆದಿರುವ ನಮಿತಾ ತಮ್ಮ ಭಾವಿ ಪತಿಯನ್ನ ತಾವೇ ಪರಿಚಯ ಮಾಡಿಕೊಟ್ಟಿದ್ದಾರೆ. ಹಾಗಿದ್ರೆ, ನಮಿತಾ ಮದುವೆ ಆಗಲಿರುವ ಆ ಹುಡುಗ ಯಾರು? ಇವರಿಬ್ಬರ ಮದುವೆ ಯಾವಾಗ ಮತ್ತು ಎಲ್ಲಿ. ತಮಿಳು ನಟ ವೀರೇಂದ್ರ ಚೌಧರಿ ಅವರ ಜೊತೆ ನಟಿ ನಮಿತಾ ಮದುವೆ ಆಗುತ್ತಿದ್ದಾರೆ. ಈ ಸುದ್ದಿಯನ್ನ ಸ್ವತಃ ನಮಿತಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.